Friday, August 8, 2008

ಒಂದು ವಾಚಿನ ಕಥೆ

ನಾನು ಆಗ ಎಂಟನೇ ಇಯತ್ತೆಯಲ್ಲಿದ್ದೆ. ಅಚಾನಕ್ಕಾಗಿ ನನ್ನೊಳಗೆ ಒಂದು ದಿನ ಹುಚ್ಚು ಹಠವೊಂದು ಹೊಕ್ಕಿತು. ಒಂದು ವಾಚು ಬೇಕೆಂಬುದೇ ಅದಾಗಿತ್ತು. ಅದು ಕೇವಲ ೨೫ ರೂಪಾಯಿದಾದರೂ ಪರವಾಗಿಲ್ಲ, ಅದರೆ ನನಗೆ ಪರೀಕ್ಷೆ ಬರೆಯಲು ಹಾಗೂ ಇತರ ಕಾರ್ಯಾರ್ಥಗಳಿಗಾಗಿ ಒಂದು ವಾಚು ಬೇಕೇ ಬೇಕೆಂಬುದು ನನ್ನ ವಾದವಾಗಿತ್ತು.

ಘಟನೆ ನಡೆದಿದ್ದು ಮಳಲಗಾಂವಿನಲ್ಲಿ.”ಮಕ್ಕಳು ಏನೇನೋ ಬೇಕೆಂದು ಯಾವಗಲೂ ಹಠ ಮಾಡುತ್ತಿರುತ್ತಾರೆ. ಅವರಿಗೆ ಬೇಕೆಂದುದೆಲ್ಲಾ ಕೊಡಿಸಿಬಿಟ್ಟರೆ ಆಮೇಲೆ ಮೈಮೇಲೇ ಹತ್ತಿಕುಳಿತುಬಿಡುತ್ತಾರೆ" ಎಂಬುದು ಅಲ್ಲಿನ ಎಲ್ಲರ ವಾದ. ಹಾಗೆಯೇ ನನ್ನ ವಾದ ಜೋರಾದಂತೆ ಎಲ್ಲರೂ ತಾವೆಲ್ಲಾ ತಮ್ಮ ಎಷ್ಟನೇ ವಯಸ್ಸಿನಲ್ಲಿ ವಾಚು ಖರೀದಿಸಿದ್ದೇವೆ ಎಂದು ವಿವರಿಸತೊಡಗಿದರು. ದಾರಿಯಲ್ಲಿ ಹೋಗುವವರನ್ನ, ಪರೀಕ್ಷೆಯಲ್ಲಿ ಮಾಸ್ತರರನ್ನ ಹೀಗೆ ಯಾರನ್ನು ಕೇಳಿದರೂ ಟೈಮು ಗೊತ್ತಾಗುತ್ತದೆ, ಅದರಲ್ಲಿ ತನಗೊಂದು ವಾಚು ಬೇಕೆಂದು ಹಠ ಮಾಡುವದು ಅತೀ ಮೂರ್ಖತನವೆಂದು ವಿವರಿಸಿದರು. ಮನೆಯ ಅಜ್ಜರಂತೂ”ಈಗಿನ ಕಾಲದ ಮಕ್ಕಳ ಹಠ, ಬೇಡಿಕೆ ಹಾಗೂ ಇತರೆ ವರ್ತನೆಗಳಿಗೆ ಬಹಳ ರೋಸಿಹೋಗಿದ್ದೇನೆ, ಹಿಂದಿನ ಕಾಲದಲ್ಲಿ ಮಕ್ಕಳೆಲ್ಲಾ ಎಷ್ಟು ಶಾಂತಚಿತ್ತರಾಗಿದ್ದರು’ ಎಂದು ಕನವರಿಸಿದರು. ಶಿರಿಯಪಚ್ಚಿಯಂತೂ ಎಂದಿನಂತೆ ನನ್ನನ್ನು ನನ್ನ ಅಜ್ಜನಿಗೇ ಹೋಲಿಸುತ್ತಾ, ’ ನಿನ್ನ ಹಠ, ಮಾತಾಡುವ ಕಲೆ ಎಲ್ಲಾ ನಿನ್ನ ಅಜ್ಜನಂತೆಯೇ ’ ಎಂದ :-) ’ಆದರೂ ಅಜ್ಜ ಯಾಕೆ ಎಂದಿಗೂ ನನ್ನ ಬೆಂಬಲಿಸುವದಿಲ್ಲ?’ಎಂಬುದು ನನ್ನ ಅರಗಲಾರದ ಪ್ರಶ್ನೆಯಾಗಿತ್ತು.

ನಾನೂ ಸಹ ನನ್ನ ವಾದವನ್ನ ಹಿಂಪಡೆಯಲಿಲ್ಲ. ಎರಡು ದಿನ ಸತತವಾಗಿ ಕಣ್ಣೇರು ಸುರಿಸಿದೆ.!! ಅದೂ ಕೋಣೆಯ ಗಾದೀ ಮಂಚದ ಒಳಗೆ ಹೊಕ್ಕಿ. ಅದು ನಮ್ಮೆಲ್ಲರ ಒಂದು ಸುಭದ್ರ ಸ್ಠಾನವಾಗಿತ್ತು. ನನ್ನ ಅದೃಷ್ಟವೆಂಬಂತೆ ಏನೋ ಅಂದೇ ಗೋವಾದಿಂದ ಶಿವರಾಮಪಚ್ಚಿ ಬಂದಿದ್ದ. ನನ್ನ ದು:ಖವನ್ನು ನೋಡಲಾರದೇ ಅಂತೂ ಅವನ ಕೈಗೆ ಕಟ್ಟಿದ್ದ ವಾಚನ್ನೇ ಬಿಚ್ಚಿಕೊಟ್ಟು ಸಮಾಧಾನಪಡಿಸಿದ :-)
ಇಷ್ಟೆಲ್ಲಾ ಮಾಡಿ ಪಡೆದ ವಾಚು ನಮ್ಮ ಭೈರುಂಭೆ ಹೈಸ್ಕೂಲಿನಲ್ಲೇ ಕೆಲವೊಂದರಲ್ಲಾಗಿತ್ತು.
ಶಿವರಾಮಪಚ್ಚಿಗೆ ಆ ವಾಚಿಗೋಸ್ಕರ ಇಂದಿಗೂ ನಾನು ಧನ್ಯ.

ಈ ಕಥೆ ಮೊನ್ನೆ ಆಫೀಸಿನ ಚಹಾ ವೇಳೆಯಲ್ಲಿ ಮಾತನಾಡುತ್ತಾ ಬಾಯಿಗೆ ಬಂತು. ಇಲ್ಲಿ ಮೂಡಿಸಿದೆ :-)

3 comments:

Unknown said...

really good one, makes me to remember such things which i too came accross in my childhood.

Pradeep Hegde said...

Satisha.... Ninna " Vachina Kathe" Sakkattagiddu bidu..... Nandu swalpa ide thara katheneya....

Anonymous said...

Super stories..Chennagiddu...